ಮುಖ್ಯಾಂಶಗಳು 

Dt: 22-Mar-2025

💫✨ ಯುಗಾದಿ ಹಬ್ಬದ ನಿಮಿತ್ತ ವಿಶೇಷ ಆಹ್ವಾನ! ✨💫

ಪ್ರಿಯ ಕನ್ನಡ ಬಾಂಧವರೇ,

ಹಬ್ಬ ಎಂದರೇನೇ ನಮಗೆಲ್ಲಾ ಹರ್ಷ ಮತ್ತು ಸಂತೋಷದ ಸಮಯ. ನಮ್ಮ ಸಂಪ್ರದಾಯದ ಅನೇಕ ಶ್ರೇಷ್ಠತೆಗಳನ್ನು ಮೆಲುಕು ಹಾಕುವ, ಹೊಸ ವರ್ಷದ ಪ್ರಾರಂಭವನ್ನು ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬ ಹತ್ತಿರ ಬಂದಿದೆ!

ಯುಗಾದಿಯು ಬರೀ ಹಬ್ಬವಾಗಿರದೇ, ನಮ್ಮ ಹೊಸ ವರ್ಷದ ಪ್ರಾರಂಭ. ಚೈತ್ರ ಮಾಸದ ಮೊದಲ ದಿನವು ನಮ್ಮ ಜೀವನದಲ್ಲಿ ಹೊಸ ಸಂಕಲ್ಪಗಳನ್ನೂ ಹೊಸ ಕ್ರಮವನ್ನೂ, ಮತ್ತು ಹೊಸ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿ. ವಸಂತದಿಂದ ಪ್ರಕೃತಿ ಹೊಸ ಪ್ರಯಾಣವನ್ನು ಆರಂಭಿಸುತ್ತದೆ. ಹೂವುಗಳು ಚೆಂದವಾಗಿ ಅರಳುತ್ತವೆ, ಎಲ್ಲೆಲ್ಲೂ ಹೊಸ ಹಸಿರಿನ ಪೈರಿನ ಸಿರಿ, ಗಾಳಿಯಲ್ಲಿಯ ತಾಜಾತನ  ಪ್ರೋತ್ಸಾಹ ನೀಡುತ್ತದೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿಯೂ ಕೂಡ ಅರಿವಿಲ್ಲದೇ ವಸಂತ ಋತುವಿನ ಹೊಸ ಚೈತನ್ಯ ಮನಸ್ಸಿಗೆ ಮುದ ನೀಡುತ್ತದೆ. 

ಯುಗಾದಿಯ ಈ ಶುಭ ಸಂದರ್ಭದಲ್ಲಿ, ನಮ್ಮ ಕನ್ನಡ ಸಂಘವು ಹೊಸ ಹುಮ್ಮಸ್ಸಿನೊಂದಿಗೆ ಹೊಸ ವರ್ಷವನ್ನು ಶುಭಕರವಾಗಿ ಹಾಗೂ ಸಮೃದ್ಧವಾಗಿ ಆಚರಿಸುವ ಹಾದಿಯಲ್ಲಿದೆ.   

ಬನ್ನಿ! ನಾವು ನೀವೆಲ್ಲರೂ ಒಂದಾಗಿ ಯುಗಾದಿ ಹಬ್ಬದ ಈ ಉತ್ಸವವನ್ನು ವಿಶಿಷ್ಟವಾಗಿ, ಸಂಭ್ರಮದಿಂದ ಆಚರಿಸೋಣ! ಬೇವು-ಬೆಲ್ಲವನ್ನು ಹಂಚಿಕೊಳ್ಳುವ ಮೂಲಕ, ವಸಂತದ ನವಚೇತನದಿಂದ ತುಂಬಿದ ಹೊಸ ವರ್ಷಕ್ಕೆ ಸ್ವಾಗತ ಕೋರೋಣ.
 

ಈ ಕಾರ್ಯಕ್ರಮಕ್ಕೆ ಬರುವಾಗ ಗಮನಿಸಬೇಕಾದ ಉಡುಗೆ-ತೊಡುಗೆಯ ವಿವರಗಳು:

ಮಹಿಳೆಯರು: ಸಾಂಪ್ರದಾಯಿಕ ರೇಷ್ಮೆ ಸೀರೆ

ಯುವ ಹುಡುಗಿಯರು: ಲಂಗ ದಾವಣಿ 

ಪುರುಷರು ಮತ್ತು ಯುವ ಹುಡುಗರು:  ಧೋತಿ – ಜುಬ್ಬಾ / ಪಂಚೆ – ಮೇಲಂಗಿ 

ಈ ಕಾರ್ಯಕ್ರಮಕ್ಕಾಗಿ ನೃತ್ಯ ಸಂಯೋಜಕರನ್ನು ಆಹ್ವಾನಿಸುತ್ತಿದ್ದೇವೆ.
ವಿವರಗಳು:

  • ಥೀಮ್ : ಜೀವನದಲ್ಲಿ ಬದಲಾವಣೆ ನಿರಂತರ. ಈ ಬದಲಾವಣೆಯನ್ನು ಸ್ವೀಕರಿಸುತ್ತಾ, ಹಳೆಯ ಹಾಗೂ ಹೊಸ ರಾಗಗಳಿಗೆ ನೃತ್ಯದ ಮೂಲಕ ಹಳೆಯ ಮಧುರ ನೆನಪುಗಳೊಂದಿಗೆ ನವ ನವೀನ ಭಾವವನ್ನು ಬೆರೆಸೋಣ. 
  • ಕಾರ್ಯಕ್ರಮದ ಅವಧಿ:
    • ಭಾಗವಹಿಸುವವರು (6 ರಿಂದ 10 ಜನ) : 5 ನಿಮಿಷ
    • ಭಾಗವಹಿಸುವವರು (10 ಕ್ಕಿಂತ ಮೇಲ್ಪಟ್ಟು) : 8 ನಿಮಿಷ

  • ಭಾಗವಹಿಸುವವರು ಕನ್ನಡ ಸಂಘದ ಸದಸ್ಯತ್ವ ಪಡೆದಿರಬೇಕು. 
  • ಭಾಗವಹಿಸುವವರು ಕೇವಲ ಒಂದು ಕಾರ್ಯಕ್ರಮದಲ್ಲಿ ಮಾತ್ರ ಪಾಲ್ಗೊಳ್ಳಬೇಕು. 
  • ನೃತ್ಯ ಸಂಯೋಜಕರು ಮಾರ್ಚ್ 31, 2025 ರೊಳಗೆ ಹಾಡುಗಳ ಆಯ್ಕೆಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
  • ಭಾಗವಹಿಸುವವರ ಹೆಸರುಗಳು ಮತ್ತು ಕಾರ್ಯಕ್ರಮದ ಆಡಿಯೋ, ಕಾರ್ಯಕ್ರಮದ ಬಗ್ಗೆ ಸಣ್ಣ ಬರಹವನ್ನು ಸಾಂಸ್ಕೃತಿಕ ಸಂಯೋಜಕಿ ಶ್ರೀಮತಿ ಶ್ವೇತಾ ಗುರು ಅವರಿಗೆ ಏಪ್ರಿಲ್ 14, 2025 ರೊಳಗೆ kst.cultural23@gmail.com ಗೆ ಕಳುಹಿಸಬೇಕು.

ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಕೆಳಗಿನ ಕರಪತ್ರವನ್ನು ನೋಡಿ. ಹಾಗೂ ಕಾರ್ಯಕ್ರಮಕ್ಕೆ ಬರಲು ಟಿಕೆಟ್ ಲಿಂಕನ್ನು ಮುಂಬರುವ ಈ-ಪತ್ರದಲ್ಲಿ ಹಂಚಿಕೊಳ್ಳುತ್ತೇವೆ.


Namaskara Kannada bandhavare,

Festivals are a time of joy and happiness for all of us. The Ugadi festival, which marks the beginning of the new year with great enthusiasm and reflects on many of our cherished traditions, is fast approaching!

Ugadi is not just a festival; it is the beginning of our new year. The first day of the month of Chaitra-maasa  inspires us to make new resolutions, take fresh actions, and make meaningful decisions in our lives. Nature embarks on a new journey with the arrival of spring. Flowers bloom in full splendor, the air is filled with the fragrance of new greenery, and the freshness around us encourages us. Along with this, the vibrant spirit of spring fills our hearts and minds, often without us even realizing it.

On this auspicious occasion of Ugadi, our Kannada Sangha is set to celebrate the new year with renewed enthusiasm, prosperity, and joy.

Come! let us all join together to celebrate this festival of Ugadi in a unique and joyous way! Let us embrace the new year, filled with the fresh spirit of spring, by sharing ‘Bevu-Bella’.

Let the celebrations begin!

Dress code for this event:

Women: Traditional silk saree

Young girls: Langa Davani

Men and boys: Dhoti – Jubba / Panche – Shirt

We are inviting choreographers for this event. Find the details below:

  • Theme: Change is the only constant in life, bringing new opportunities for growth. Let’s embrace this transformation by blending the freshness of new beginnings with the cherished melodies of the past. Through dance, let’s celebrate life’s journey with joy, energy, and harmony.
  • Duration of the program:
    • Participants (6 to 10 people): 5 minutes
    • Participants (above 10): 8 minutes
  • Participants must be members of Kannada Sangha.
  • Participants should participate in only one program.
  • Choreographers should register their names with the selection of songs by March 31, 2025.
  • The names of the participants and the audio of the program, a short writing about the program should be sent to Cultural Coordinator Smt. Shweta Guru by April 14, 2025 at kst.cultural23@gmail.com.

For more details of the program, see the flyer below. And we will share the ticket link to attend the program in the upcoming News-Letter

Scroll to Top
Share via
Copy link
Powered by Social Snap