ಎಲ್ಲರಿಗೂ ನಮಸ್ಕಾರ.
“ಕನ್ನಡ ಕಲಿಕೆ” ಮಕ್ಕಳ ಕನ್ನಡ ಶಾಲೆಗಳ ವಾರ್ಷಿಕೋತ್ಸವ ಸಂಭ್ರಮದ ಕರೆಯೋಲೆ
ಅಮ್ಮಾ ಎನ್ನುವ ಪದದ “ಅ’ ದಿಂದ ಹಿಡಿದು ಕನ್ನಡದಲ್ಲೇ ಪುಟಿದೇಳುವ ಮಾತಿನ ತನಕದ “ಕನ್ನಡ ಕಲಿಕೆ” ಮಕ್ಕಳ ಕನ್ನಡ ಶಾಲೆಗಳ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮಾಚರಣೆಗೆ ತಮಗೆಲ್ಲಾ ಸ್ವಾಗತ.
ನಮ್ಮ ಭಾಷೆ -ನಮ್ಮ ಹೆಮ್ಮೆ ಎಂದು ನಮ್ಮ ಕನ್ನಡ ಕಲಿಕೆಯ ಮುದ್ದು ಮಕ್ಕಳೆಲ್ಲ ವರ್ಷವೆಲ್ಲಾ ಕಲಿತಿರುವುದನ್ನ ನೋಡುವುದು, ಕಷ್ಟಪಟ್ಟು ಕಲಿಸಿದ ಶಿಕ್ಷಕ-ಶಿಕ್ಷಕಿಯರ ಶ್ರಮವನ್ನ ಸಂಭ್ರಮಿಸುವ ದಿನ ಈಗ ಕೂಡಿ ಬಂದಿದೆ. ಇದೇ ಬರುವ ಭಾನುವಾರ ದಿನಾಂಕ ಜೂನ್ 9 ರಂದು ಸಂಜೆ 4:30 ಕನ್ನಡ ಕಲಿಕೆಯ ಸಂಭ್ರಮವು ಶೃಂಗೇರಿ ಸಭಾ ಮಂಟಪದಲ್ಲಿ ಆಚರಿಸಲಾಗುತ್ತಿದೆ. ನೀವೆಲ್ಲರೂ, ನಿಮ್ಮ ಮನೆಯವರು, ಮತ್ತು ಸ್ನೇಹಿತರನ್ನು ಕರೆತರುವುದನ್ನು ಕಾತರದಿಂದ ಸ್ವಾಗತಿಸಲು ನಾವೆಲ್ಲಾ ಎದುರು ನೋಡುತ್ತಿರುವೆವು.
ದಯವಿಟ್ಟು ಈ ಕೊಂಡಿಯನ್ನು ಒತ್ತಿ ನಿಮ್ಮ ಬರುವಿಕೆಯನ್ನು ದೃಢೀಕರಿಸಿ – https://forms.gle/
ತಾವೆಲ್ಲರೂ ಖಂಡಿತ ಬರುವಿರಲ್ಲವೆ? ಬನ್ನಿ, ನಾವೆಲ್ಲಾ ಒಂದಾಗಿ ಕನ್ನಡದ ಕೈಗಳನ್ನು ಜೋಡಿಸೋಣ. ಕಾರ್ಯಕ್ರಮವನ್ನು ಯಶಸ್ವಿಯಾಗಿಸೋಣ.
ಸರ್ವರಿಗೂ ಸ್ವಾಗತವನ್ನ ಬಯಸುವ
-ಕನ್ನಡ ಕಲಿಕೆ ಸಮಿತಿ ಮತ್ತು ಕನ್ನಡ ಸಂಘ ಟೊರೊಂಟೊ ಪದಾಧಿಕಾರಿಗಳು.
Namaste Everyone!
Little KST students of Kannada Kalike Schools welcome you and your family to our Annual School Day! Please join us on June 9th to support and encourage KST’s Kannada Learning Platform!
There will be a variety of programs including dance, drama and songs to listen and watch throughout.
Link for tickets to Kannada Kalike Schools Annual Day – https://forms.gle/
We kindly request everyone to purchase tickets as soon as possible so that we can do better preparations for the event, including sitting arrangements and dinner.
Purchasing tickets asap will greatly help us to organize the event well.
Thank you for your support.