Executive Committee (2024-25)

IMG_7427

 President
Brinda Muralidhar
kst.president@gmail.com

ನಾನು ಬೃಂದಾ ಮುರಳೀಧರ್.  ಮೂಲತಃ, ಸುಂದರ ಮೈಸೂರು ನನ್ನೂರು. ನನ್ನ ಪತಿ ಗನ್ನಿ ಮುರಳೀಧರ್ ಮತ್ತು ನಾನು ಪುಷ್ಪನಗರಿ ಬ್ರಾಂಪ್ಟನ್ ನಿವಾಸಿಗಳು.  ವೃತ್ತಿಯಲ್ಲಿ ನಾನು ಬರಹಗಾರ್ತಿ, ರಂಗಭೂಮಿ ಕಲಾವಿದೆ ಮತ್ತು ಚಲನಚಿತ್ರ ನಿರ್ಮಾಪಕಿ.

ಮ್ಮ ಕನ್ನಡ ಸಂಘ, ನನಗೆ ಕೇವಲ ಒಂದು ಸಂಘಟಿತ ಸಂಸ್ಥೆಯಲ್ಲ. ಇದು ಮಾತೃಭೂಮಿಯಿಂದ ಬಹುದೂರವಿರುವ ನಮ್ಮೆಲ್ಲ ಕನ್ನಡಿಗರನ್ನು, ಒಕ್ಕುಟುಂಬದಂತೆ ಸೇರಿಸುವ ಒಂದು ಸುಂದರ ಭಾಂದವ್ಯ.

KST ಯೊಂದಿಗೆ ನನ್ನ ನಂಟು ಎರಡು ದಶಕಗಳಿಗೂ ಮೀರಿ.  ಪ್ರತಿಯೊಂದು ಕಾರ್ಯಕ್ರಮದಲ್ಲಿ ಒಂದಲ್ಲ ಒಂದು ರೂಪದಲ್ಲಿ, ಕಲಾವಿದೆಯಾಗಿ/ ಕಾರ್ಯಕ್ರಮದ ರಚನೆಕಾರಳಾಗಿ/ ಸಮುದಾಯ ಸಂಘಟಿಕಳಾಗಿ/ ಉತ್ಸಾಹಿ ಬೆಂಬಲಿಗಳಾಗಿ, ವೇದಿಕೆಯ ಮುಂದೆ ಅಥವಾ ನೇಪಥ್ಯದಲ್ಲಿ, ಅನೇಕ ರೀತಿಯಲ್ಲಿ ತೊಡಗಿಸಿಕೊಂಡಿರುವ ಸೌಭಾಗ್ಯ ನನ್ನದು. KSTಗಾಗಿ ರೂಪಿಸಿದ ಅನೇಕ ಸೃಜನಶೀಲ ಕೃತಿಗಳಲ್ಲಿ ನನ್ನ ಅತ್ಯಂತ ಮೆಚ್ಚಿನದು, 40ನೇ ವಾರ್ಷಿಕೋತ್ಸವ ಸಂಧರ್ಭದಲ್ಲಿ, ಮುರಳಿ ಜೊತೆ ರಚಿಸಿದ ಸಾಕ್ಷ್ಯಚಿತ್ರ “ಕನ್ನಡ ಸಂಘ ನಡೆದು ಬಂದ ದಾರಿ”.  ಈ ಚಿತ್ರದಲ್ಲಿ, ಕನ್ನಡ ಸಂಘ ಟೊರೊಂಟೊ ಹೇಗೆ ಮತ್ತು ಯಾಕೆ ರೂಪುಗೊಂಡಿತು ಎಂಬುದರ ಬಗ್ಗೆ, ನಮ್ಮ ಸಂಘವನ್ನು ಸ್ಥಾಪಿಸಿದ ಹಿರಿಯ ರೂವಾರಿಗಳ ಜೊತೆ ನಾವು ನಡೆಸಿದ ಸಂಭಾಷಣೆ ಅತ್ಯಂತ ಮನೋಜ್ಞ. ಎಷ್ಟೇ ಏರು ಪೇರುಗಳು ಇದ್ದರೂ, ಕನ್ನಡ ಸಂಘದ ಸಲುವಾಗಿದ್ದ ಅವರ ಧೃಢ ಸಂಕಲ್ಪ ನನಗೆ ಸ್ಪೂರ್ತಿದಾಯಕ.

ನೂರಾರು  ಕನ್ನಡಿಗರ ಪ್ರೇಮ-ಪರಿಶ್ರಮದ ಫಲ, ಈ ವರ್ಷ KST ತನ್ನ 50ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಈ ಸಂಧರ್ಭದಲ್ಲಿ, ನಮ್ಮ ಪ್ರತಿಭಾನ್ವಿತ ಕಾರ್ಯಕಾರಿ ಸಮಿತಿಯ ಜೊತೆಗೆ, ಮುಂಚೂಣಿ ವಹಿಸಿ ಸೇವೆ ಸಲ್ಲಿಸಲು ನನಗೆ ಅವಕಾಶ ಕೊಟ್ಟಿರುವುದಕ್ಕೆ, ಸಂಘದ ಸದಸ್ಯರಿಗೆ ಕೃತಜ್ಞಳಾಗಿದ್ದೇನೆ. ನಾವೆಲ್ಲ  ಕನ್ನಡಿಗರು ಒಟ್ಟಾಗಿ, ನಮ್ಮ KSTಯ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ಹಿರಿಯ  ಹಾಗೂ ನೂತನ ಕೆನಡಾ ಕನ್ನಡಿಗರಲ್ಲಿ ನನ್ನ ಹೃತ್ಪೂರ್ವಕ ವಿನಂತಿ.

Vice President
Vijay Bangalore
kst.vicepresident23@gmail.com

ಎಲ್ಲರಿಗೂ ನಮಸ್ಕಾರ.
ನನ್ನ ಹೆಸರು  ವಿಜಯ್ ಬೆಂಗಳೂರು. ೨೦೨೩೨೪ ನೇ ವರ್ಷದ ಕನ್ನಡ ಸಂಘ ಟೊರೊಂಟೊ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾನು ಮೂಲತಃ ಬೆಂಗಳೂರಿನವನು, ಈಗ ಟೊರೊಂಟೊನಲ್ಲಿ ಕಳೆದ ೧೦ ವರ್ಷದಿಂದ ನನ್ನ ಹೆಂಡತಿ ಕೃಪಾ ಹಾಗೂ ಮಗ ಧೀರಜ್ ಜೊತೆ ವಾಸಿಸುತಿದ್ದೇನೆ. ವೃತ್ತಿಯಲ್ಲಿ .ಟಿ ಎಂಜಿನಿಯರ್ ಆಗಿರುವೆನು.

ನಿಮ್ಮೆಲ್ಲರ  ಸಹಕಾರದೊಂದಿಗೆ ೫೦ನೇ ಸುವರ್ಣ ವರ್ಷಾಚರಣೆ ಅಂಗವಾಗಿ ವಿನೂತನ ಕಾರ್ಯಕ್ರಮಗಳನ್ನು ನೀಡಲು ಹಾಗೂ ಕೆ.ಎಸ್.ಟಿ ವಿವಿಧ ಕಾಯಕ್ರಮಗಳಲ್ಲಿ ಸೇವೆ ಸಲ್ಲಿಸಲು ಉತ್ಸುಕನಾಗಿದ್ದು, ಸಮುದಾಯದ ಸಹಕಾರಕ್ಕೆ ಕೋರುತ್ತೇನೆ. ಧನ್ಯವಾದಗಳು. ಜೈ ಕರ್ನಾಟಕ !! 

Secretary
Shobha Hegde
Kst.secretary23@gmail.com

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಶೋಭಾ ಹೆಗ್ಡೆ  ಮೂಲತಃ  ಉಡುಪಿ ಜಿಲ್ಲೆಯವಳಾದ ನಾನು ಕೆನಡಾದಲ್ಲಿ ಪತಿ ಸುಧೀರ್ ಹೆಗ್ಡೆ ಹಾಗೂ ಮಗಳು ಕಾವ್ಯ ಹೆಗ್ಡೆ ಯೊಂದಿಗೆ ಮಿಸ್ಸಿಸ್ಸಾಗ ನಗರದಲ್ಲಿ ಕಳೆದ ೨೦ ವರ್ಷಗಳಿಗೂ ಮೀರಿ ವಾಸಿಸುತ್ತಿದ್ದೇನೆ.   ವೃತ್ತಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ನನಗೆ ಕನ್ನಡ ಭಾಷೆ ಮೇಲೆ ಬಹಳ ಅಭಿಮಾನ ಅಂತಯೇ ಪಿಡಿಯಸ್ ಬಿ  ಶಾಲೆಯಲ್ಲಿ ಕನ್ನಡವನ್ನು ಮಕ್ಕಳಿಗೆ ಪಾಠ ಮಾಡುವ ಮೂಲಕ ಕನ್ನಡ ನಾಡಿನ ಸಂಸ್ಕೃತಿಯನ್ನು ಉಳಿಸುವ ಅಳಿಲು ಸೇವೆ ಮಾಡುತ್ತಿದ್ದೇನೆ.  

ಸ್ವಯಂ ಸೇವಕಿಯಾಗಿ ಕೆಲಸ ಮಾಡುವ ಹಂಬಲ ಇರುವ ನಾನು  ೨೦೨೩೨೦೨೪  ಕನ್ನಡ ಸಂಘ ಟೊರೊಂಟೊದ ಕಾರ್ಯಕಾರಿ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ

 

RaghavendraRaoS

Treasurer
Raghavendra Rao S
kst.treasurer23@gmail.com

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ರಾಘವೇಂದ್ರ ರಾವ್ ಎಸ್ನಾನು ಮೂಲತಃ ಬೆಂಗಳೂರಿನವನು.   ನಾನು 2010 ರಲ್ಲಿ ಕೆನಡಾ ದೇಶಕ್ಕೆ ತೆರಳಿದೆ ಮತ್ತು ಪ್ರಸ್ತುತ  ನನ್ನ ಪತ್ನಿ ವೀಣಾ ಮತ್ತು 2 ಹೆಣ್ಣುಮಕ್ಕಳೊಂದಿಗೆ (ಯುಕ್ತಾ ಮತ್ತು ಅಮಿತಾವಾಸಿಸುತ್ತಿದ್ದೇನೆನಾನು ಟೊರೊಂಟೊದಲ್ಲಿ US ಮೂಲದ ಕಂಪನಿಯ IT ವಿಭಾಗದಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ

 ವರ್ಷ KST ಕಾರ್ಯಕಾರಿ ಸಮಿತಿಯ ಖಜಾಂಚಿಯಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟ ಎಲ್ಲರಿಗೂ ನಾನು  ಚಿರಋಣಿ ಬಾರಿ ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ನಮ್ಮ ತಾಯ್ನಾಡಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಬಯಸುತ್ತೇನೆ.

KST ಸುವರ್ಣ ಮಹೋತ್ಸವದ ಸಲುವಾಗಿನಾನು ಇತರ  ಸದಸ್ಯರು ಮತ್ತು ಕನ್ನಡ ಸಮುದಾಯದೊಂದಿಗೆ ಸೇರಿ ನಮ್ಮ ಆಲೋಚನೆ ಮತ್ತು ಪರಿಶ್ರಮದಿಂದ  ಅದ್ಭುತ ಕಾರ್ಯಕ್ರಮಗಳನ್ನು ಹೊರತರಲು ಸಮುದಾಯದೊಂದಿಗೆ ಕೈಜೋಡಿಸಲು ಎದುರು ನೋಡುತ್ತಿದ್ದೇನೆ

RameshS

Sports Coordinator
Ramesh Srinivas
kst.youthsports23@gmail.com

ನಮಸ್ಕಾರನನ್ನ ಹೆಸರು ರಮೇಶ್ ಶ್ರೀನಿವಾಸ್.  ೨೦೨೩-೨೪ ನೇ ವರ್ಷದ ಕನ್ನಡ ಸಂಘ ಟೊರೊಂಟೊ ಕಾರ್ಯಕಾರಿ ಸಮಿತಿಯ ಸಮುದಾಯದ ಕ್ರೀಡಾ ಸಂಯೋಜಕ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮೂಲತಃ ಚಿಂತಾಮಣಿ ಜಿಲ್ಲೆ ಯವರಾಗಿದ್ದು  ಕಳೆದ 16 ವರ್ಷಗಳಿಂದ ಕೆನಡಾದಲ್ಲಿ ಪತ್ನಿ ದೀಪಾ ಮತ್ತು ಪ್ರೀತಿಯ ಮಗ ಹಿತಾಂಶ್ ಜೊತೆ ವಾಸಿಸುತ್ತಿದ್ದೇನೆ.  ಪ್ರಸ್ತುತ ಟಿ.ಡಿ (TD)  ಬ್ಯಾಂಕ್ ಅಲ್ಲಿ  ಐಟಿ (IT) ಲೀಡರ್ ಆಗಿ ಕೆಲಸ ಮಾಡುತ್ತಿದ್ದೇನೆ.  ಹೆಮ್ಮೆಯ ಕನ್ನಡಿಗನಾಗಿರುವ ನಾನು ಈ ಅವಕಾಶವನ್ನು ಬಳಸಿಕೊಂಡು ಕನ್ನಡ ಸೇವೆ ಮಾಡಲು ಬಯಸುತ್ತೇನೆ.

ಈ ಬಾರಿ ಕನ್ನಡ ಸಂಘದ 50ನೇ  ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ನಮ್ಮ  ಮುಂದಿನ ಪೀಳಿಗೆಗೆ ಕರ್ನಾಟಕದ ಮೌಲ್ಯ ಮತ್ತು ಸಂಸ್ಕೃತಿಯನ್ನು ಹರಡಲು ಸಹಾಯ ಮಾಡುವ ಹಾಗೂ ಯುವಕ/ಯುವತಿಯರಿಗೆ ಸರಿಯಾದ ಮಾರ್ಗದರ್ಶನ ತೋರಿಸುವ ಸೇವೆ ಮಾಡಲು ತುಂಬಾ ಸಂತೋಷವಾಗುತ್ತಿದೆ.

Shubada01

Youth Coordinator
Shubhada Uppin
kst.youthcoordinator24@gmail.com

ನಮಸ್ಕಾರ ನನ್ನ ಹೆಸರು ಶುಭದ ಉಪ್ಪಿನ್, ಮೂಲತಃ ಹುಬ್ಬಳಿ ಅವಳು ಆದ ನಾನು ಬೆಳದಿದ್ದು ರಾಯಚೂರು. ಮದುವೆ ಆಗಿದ್ದು ಸಂಜಯ್ ಶಾಂತಗಿರಿ, ಗದಗ್ ಊರಿನವರನ್ನು. ಕಳೆದ ಹದಿಮೂರು ವರ್ಷದಿಂದ ಕೆನಡಾದಲ್ಲಿ ನೆಲೆಸಿರುವ ನಾನು ನನ್ನ ಪತಿ ಸಂಜಯ್ ಹಾಗೂ ಮಗಳು ಧ್ರಿತಿ ಶಾಂತಗಿರಿ ಹಾಗೂ ಮಗ ಅರ್ಜುನ್ ಶಾಂತಗಿರಿ ಜೊತೆ ಮಿಸ್ಸಿಸ್ಸಾಗದಲ್ಲಿ ವಾಸವಾಗಿದ್ದೇನೆ. ವೃತ್ತಿಯಲ್ಲಿ ನಾನು T.D. ಬ್ಯಾಂಕ್ ನಲ್ಲಿ ಪರ್ಸನಲ್ ಬ್ಯಾಂಕ್ ಅಸೋಸಿಯೇಟ್ ಆಗಿರುವ ನನಗೆ ನಮ್ಮ ಕನ್ನಡ ಬಾಂದವರು ಅಂದರೆ ಬಹಳ ಅಭಿಮಾನ. ಕನ್ನಡ ಸಂಘ ನನಗೆ ನಮ್ಮ ಊರಿನ ಆತ್ಮೀಯತೆ ಹಾಗೂ ನಮ್ಮ ಕುಟುಂಬ ಎಂದು ಭಾವಿಸುತ್ತೇನೆ.
ನಮ್ಮ ಮುಂದಿನ ಪೀಳಿಗೆಯವರಾದ ನಮ್ಮ ಕನ್ನಡ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸುವಂತೆ ಪ್ರೋತ್ಸಾಹಿಸಿ ಅವರು ನಮ್ಮ ಕನ್ನಡ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯ ಬೇಕು ಎಂಬ ಆಸೆ ನನ್ನದು.

ಕನ್ನಡ ಸಂಘದಈ ಸುವರ್ಣ ಮಹೋತ್ಸವದಲ್ಲಿ ನಾನು ನಮ್ಮ ಯುವ ಪೀಳಿಗೆಯ ಮಕ್ಕಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾ ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಾ ಸಂಭ್ರಮದಿಂದ ಆಚರಿಸಬೇಕು ಎಂದು ಬಯಸುತ್ತಿದ್ದೇನೆ. ಧನ್ಯವಾದಗಳು. ಜೈ ಕರ್ನಾಟಕ

Community Outreach
Soumya Malaghana 
KST.community23@gmail.com

ನನ್ನ ಹೆಸರು ಸೌಮ್ಯ ಮಲಘಣ.  ೨೦೨೩-೨೪ ನೇ ವರ್ಷದ ಕನ್ನಡ ಸಂಘ ಟೊರೊಂಟೊ ಕಾರ್ಯಕಾರಿ ಸಮಿತಿಯ ಸಮುದಾಯದ ಸಂಪರ್ಕ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮೂಲತಃ ಬೆಂಗಳೂರಿನವಳು ಆದ ನಾನು ಕಳೆದ 10 ವರ್ಷಗಳಿಂದ ಕೆನಡಾದಲ್ಲಿ ಪತಿ ವೆಂಕಟೇಶ್ ಮಲಘಣ ಹಾಗೂ  ಇಬ್ಬರು ಪ್ರೀತಿಯ ಮಕ್ಕಳಾದ ಶ್ರಿನಿಕ  ಮತ್ತು ಶಿವೇನ್ ಜೊತೆ ವಾಸಿಸುತ್ತಿದ್ದೇನೆ.  ಐಟಿ (IT) ವೃತ್ತಿಯಲ್ಲಿ ಕೆಲಸ ಮಾಡುವ ನನಗೆ ನನ್ನ ಸೃಜನಾತ್ಮಕ ಕಲ್ಪನೆಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಗತಗೊಳಿಸುವ ಹಂಬಲ . 

ಈ ಬಾರಿ ಕನ್ನಡ ಸಂಘದ 50ನೇ  ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ನಮ್ಮ ಕರ್ನಾಟಕದೊಳಗಿನ ವಿವಿಧ ಸಂಸ್ಕೃತಿಗಳನ್ನು ನಿಮ್ಮೆಲ್ಲರ ಜೊತೆ ಪ್ರೀತಿಯಿಂದ  ಆಚರಿಸಲು ಬಯಸುತ್ತೇನೆ.

Cultural Coordinator
Shweta Guru
kst.cultural23@gmail.com

ನನ್ನ ಹೆಸರು ಶ್ವೇತಾ ಅಕ್ನೂರ್ ಗುರು.  ೨೦೨೩-೨೪ ನೇ ವರ್ಷದ ಕನ್ನಡ ಸಂಘ ಟೊರೊಂಟೊ ಕಾರ್ಯಕಾರಿ ಸಮಿತಿಯ ಸಮುದಾಯದ ಸಾಂಸ್ಕೃತಿಕ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಕೆನಡಾದಲ್ಲಿ ಪತಿ  ಗುರು  ಸತ್ಯನಾರಾಯಣ್ ಹಾಗೂ  ಇಬ್ಬರು ಪ್ರೀತಿಯ ಮಕ್ಕಳಾದ ಅಕ್ಷರ್ ಮತ್ತು ಸ್ವರ ಜೊತೆ ವಾಸಿಸುತ್ತಿದ್ದೇನೆ. ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ (ಭರತನಾಟ್ಯ) ತೀವ್ರವಾದ ತರಬೇತಿಯನ್ನು ಪಡೆದಿರುವ ನಾನು ಪ್ರಸ್ತುತ ಕೆನಡಿಯನ್ ಡ್ಯಾನ್ಸ್ ಕಂಪನಿ (ಬರ್ಲಿಂಗ್ಟನ್) ನಲ್ಲಿ ನೃತ್ಯ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದೇನೆ ಹಾಗೆಯೇ  ಲಲಿತಕಲೆ ಮತ್ತು ನೃತ್ಯದಲ್ಲಿ ಖಾಸಗಿ ತರಗತಿಗಳನ್ನು ಸಹ ನಡೆಸುತ್ತಿದ್ದೇನೆ. 

ಈ ಬಾರಿ ಕನ್ನಡ ಸಂಘದ 50ನೇ  ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ನಮ್ಮ ಕರ್ನಾಟಕದ ವಿವಿಧ ಶೈಲಿಯ ನೃತ್ಯಗಳ  ಪ್ರಭಾವವು ಭಾರತದ ಸಾಂಸ್ಕೃತಿಕ ದೃಷ್ಟಿಕೋನವನ್ನು ಪ್ರಭಾವಿಸಿದ ಪ್ರಮುಖ ಪ್ರಕಾರಗಳಲ್ಲಿ ಒಂದು ಎಂದು ನಿಮ್ಮೆಲ್ಲರೊಡನೆ ಸೇರಿ ವಿಜೃಂಭಣೆಯಿಂದ  ಆಚರಿಸಲು ಬಯಸುತ್ತೇನೆ. 

AravindN

Food Coordinator
Aravind Nichinametlu
kst.foodco23@gmail.com

ನನ್ನ ಹೆಸರು ಅರವಿಂದ್ ನಿಚ್ಚಿನಮೆಟ್ಲು. ೨೦೨೩-೨೪ ನೇ ವರ್ಷದ ಕನ್ನಡ ಸಂಘ ಟೊರೊಂಟೊ ಕಾರ್ಯಕಾರಿ ಸಮಿತಿಯ ಊಟ-ಉಪಚಾರ ಉಸ್ತುವಾರಿ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮೂಲತಃ ಬೆಂಗಳೂರಿನವನು ಆದ ನಾನು ಕಳೆದ 12 ವರ್ಷಗಳಿಂದ ಕೆನಡಾದಲ್ಲಿ ತಂದೆ ಆರ್.ವಿ.ಆನಂದ್, ಪತ್ನಿ ಜ್ಯೋತಿ ಹಾಗೂ ಮಗ ಆದಿತ್ಯ ಜೊತೆ ವಾಸಿಸುತ್ತಿದ್ದೇನೆ. ವೃತ್ತಿಯಲ್ಲಿ ನಾನು ವ್ಯವಹಾರ ಸಮಾಲೋಚಕ (Consultant), ಪ್ರಸ್ತುತ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವ್ಯಾಪಾರ ಮತ್ತು ಕೆನಡಿಯನ್ ಗ್ರಾಹಕರನ್ನು ನಿರ್ವಹಿಸುವ ಬೋಟಿಕ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ನಲ್ಲಿ  ಪಾಲುದಾರರಾಗುವ ಮೂಲಕ ನನ್ನ ಉದ್ಯಮಶೀಲತೆಯ ಅನ್ವೇಷಣೆಯನ್ನು ಅನ್ವೇಷಿಸುತ್ತಿದ್ದೇನೆ.  

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಕುಟುಂಬದವನಾದ ನಾನು ಈ ಬಾರಿ ಕನ್ನಡ ಸಂಘದ 50ನೇ  ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡು ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು  ನಿಮ್ಮೆಲ್ಲರ ಸಹಕಾರದ ಮೂಲಕ ಆಚರಿಸಲು ಬಯಸುತ್ತೇನೆ. 

Pra

Communications Coordinator
Prashanth Anantharamu
kst.communicationsu23@gmail.com

ಜಿಟಿಎಯಲ್ಲಿರುವ ಸಮಸ್ತ ಕನ್ನಡಿಗರಿಗೂ ಪ್ರಶಾಂತ್ ಅನಂತರಾಮು ಮಾಡುವ ಅನಂತ ನಮಸ್ಕಾರಗಳು.  ಪ್ರಸ್ತುತ ವರುಷದ ಟೊರೊಂಟೊ ಕನ್ನಡ ಸಂಘದ ಅಂತರ್ಜಾಲ ನಿರ್ವಹಿಸುವ ಜವಾಬ್ದಾರಿ ಹಾಗೂ ಹೆಮ್ಮೆ ನನ್ನದಾಗಿದೆ. 

ಕನ್ನಡ ಸಂಘದ ಸಮಸ್ತ-ಚಟುವಟಿಕೆಗಳಲ್ಲೂ ನನ್ನ-ಪರಿಧಿಯಲ್ಲಿ ಅಳಿಲು-ಸೇವೆ ಮಾಡಲು ಎದುರು ನೋಡುತ್ತಿದ್ದೇನೆ!

Chandru

Social Media Coordinator
Chandan Kumar Raja Nandakumar
kst.socialmedia@gmail.com

ನನ್ನ ಹೆಸರು ಚಂದನ್ ಕುಮಾರ್ ರಾಜಾ ನಂದಕುಮಾರ್ ನಾನು ಮೂಲತಃ ತ್ಯಾಮಗೊಂಡ್ಲು, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಡುಗ. 2018 ರಿಂದ ನಾನು Brampton ನಗರದಲ್ಲಿ ವಾಸಿಸುತ್ತಿದ್ದೇನೆ. ಅಮೆರಿಕ ಮೂಲದ ಕಂಪನಿಯಲ್ಲಿ ನಾನು ಸಾಫ್ಟ್ವೇರ್ ಪ್ರಾಜೆಕ್ಟ್ ಮ್ಯಾನೇಜರ್ (Software Project Manager) ಆಗಿ ಕೆಲಸ ಮಾಡುತ್ತಿದ್ದೇನೆ. ಹಾಗೂ  “Indians In Canada IT Services Inc” ಕಂಪನಿಯ CEO ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. 

ನಾನು ಕನ್ನಡ ಸಂಘ ಟೊರೊಂಟೊ ಸಂಸ್ಥೆಯ ಕಾರ್ಯಕಾರಿ ಸಂಸ್ಥೆಯಲ್ಲಿ ಸಾಮಾಜಿಕ ಜಾಲತಾಣ ಹುದ್ದೆಯನ್ನು ಕಾರ್ಯನಿರ್ವಹಿಸುತ್ತಿದ್ದೇನೆ.

ನಿಮ್ಮಲ್ಲಿ ಯಾವುದೇ ತರಹದ ಸಲಹೆಗಳಿದ್ದರೆ. ದಯವಿಟ್ಟು ನನ್ನ ಇಮೇಲ್ ಅಡ್ರೆಸ್ ಮುಖಾಂತರ ತಲುಪಬಹುದು.

Youth Committee – 2024- 2025

Chavvi_Harish_24

Chhavi Harish

ನಮಸ್ಕಾರ, ನನ್ನ ಹೆಸರಿ ಚ್ಚಾವಿ ಹರೀಶ್ . ನಾನು ೧೦ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ಹವ್ಯಾಸಗಳು ಗಿಟಾರ್, ಈಜುವಿಕೆ ಹಾಗೂ ಮಾರ್ಟಿಯಲ್ ಆರ್ಟ್ಸ್ ಇತ್ಯಾದಿ . ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಯುವ ಸ್ವಯಂಸೇವಕಳಾಗಿ ಕಳೆದ ವರ್ಷ ಹಾಗೂ ಈ ವರ್ಷದ ಆರಂಭದಲ್ಲಿ ಭಾಗವಹಿಸಿದ್ದೇನೆ. ನಾಯಕತ್ವ, ಭಾಗವಹಿಸುವಿಕೆ ಮತ್ತು ಇತರರೊಂದಿಗೆ ಬೆರೆಯುವ ಬಗ್ಗೆ ಕೆ ಎಸ್ ಟಿ ನನಗೆ ಸಾಕಷ್ಟು ಕಲಿಸಿದೆ. ನನ್ನ ಪರಂಪರೆ ಹಾಗು ಸಂಸ್ಕೃತಿಗೆ ಹತ್ತಿರವಾಗಲು ಕನ್ನಡ ಸಂಘವು ಸಹಾಯ ಮಾಡುತ್ತದೆ. ನಾನು ಈಗ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯಲ್ಲಿದ್ದೇನೆ, ಮತ್ತು ನಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು. 

Pavan_Suresh_24

Pavan Suresh

ನಾನು ಪವನ್ ಸುರೇಶ್. ನನಗೆ 15 ವರ್ಷ ಮತ್ತು ನಾನು ಬರ್ಲಿಂಗ್‌ಟನ್‌ನಲ್ಲಿರುವ ಕಾರ್ಪಸ್ ಕ್ರಿಸ್ಟಿ ಕ್ಯಾಥೋಲಿಕ್ ಸೆಕೆಂಡರಿ ಶಾಲೆಯಲ್ಲಿ ಗ್ರೇಡ್ 10 ವಿದ್ಯಾರ್ಥಿಯಾಗಿದ್ದೇನೆ. ಇದು ನನ್ನ ಕೆಎಸ್‌ಟಿ ಯುವ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸುವ ಸಮಯ. ನಾನು ಸ್ವಯಂಸೇವಕರಾಗಿ ಉತ್ತಮ ವರ್ಷವನ್ನು ಎದುರು ನೋಡುತ್ತಿದ್ದೇನೆ. ಇದಲ್ಲದೆ, ಕನ್ನಡ ಸಮುದಾಯಕ್ಕೆ ಸಹಾಯ ಮಾಡಲು ಮತ್ತು ನಾವೆಲ್ಲರೂ ಒಂದೇ ಎಂದು ಖಚಿತಪಡಿಸಿಕೊಳ್ಳಲು ನಾನು ಜಿಜ್ಞಾಸೆ ಮತ್ತು ಉತ್ಸಾಹವನ್ನು ಹೊಂದಿದ್ದೇನೆ. ಏಕಾಂಗಿಯಾಗಿ ಕೆಲಸ ಮಾಡುವುದಕ್ಕೆ ಹೋಲಿಸಿದರೆ ಏಕತೆಯು ಹೆಚ್ಚಿನ ಶಕ್ತಿಯನ್ನು ಹೊಂದಿದೆ ಎಂಬುದು ಇದಕ್ಕೆ ಕಾರಣ. ಇದಲ್ಲದೆ, ನಾನು ವೃತ್ತಿಪರ ಚೆಸ್ ಆಟಗಾರ ಮತ್ತು ನಾನು ಸಾಕರ್ ಕ್ಲಬ್‌ಗಾಗಿ ಆಡುತ್ತೇನೆ. ಒಂದು ದಶಕದಿಂದ, ನಾನು KST ಈವೆಂಟ್‌ಗಳಿಗೆ ಹಾಜರಾಗುತ್ತಿದ್ದೇನೆ ಮತ್ತು ಹಲವಾರು ನೃತ್ಯ ಮತ್ತು ನಾಟಕ ಪ್ರದರ್ಶನಗಳನ್ನು ಪ್ರದರ್ಶಿಸುತ್ತಿದ್ದೇನೆ. ನನ್ನ ಹವ್ಯಾಸಗಳು ಹೊರಗೆ ಹೋಗುವುದು ಮತ್ತು ಹೊರಾಂಗಣವನ್ನು ಅನ್ವೇಷಿಸುವುದು ಮತ್ತು ವಿನೋದಕ್ಕಾಗಿ ಇತರ ಕ್ರೀಡೆಗಳನ್ನು ಆಡುವುದು. ನನ್ನ ಸಂಸ್ಕೃತಿಯನ್ನು ಪ್ರತಿನಿಧಿಸಲು ಮತ್ತು ಅದನ್ನು ಹರಡಲು ನಾನು ದೇವರಿಂದ ತುಂಬಾ ಆಶೀರ್ವದಿಸಲ್ಪಟ್ಟಿದ್ದೇನೆ. ಈ ಅನುಭವಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ.

Screenshot

Srushti Muthya

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಸೃಷ್ಟಿ ಮುತ್ಯಾ. ನಾನು 11 ನೇ ತರಗತಿಯಲ್ಲಿದ್ದೇನೆ, ನಾನು ಈಗ 2 ವರ್ಷಗಳಿಂದ ಕೆಎಸ್‌ಟಿಯಲ್ಲಿದ್ದೇನೆ ಮತ್ತು ನಡೆದ ಪ್ರತಿಯೊಂದು ಘಟನೆಯನ್ನು ನಾನು ಆನಂದಿಸಿದ್ದೇನೆ, ಪ್ರತಿ ಘಟನೆಯು ನನ್ನ ಕೌಶಲ್ಯಗಳನ್ನು ಸುಧಾರಿಸಲು ಮತ್ತು ನನ್ನ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ನನಗೆ ಅವಕಾಶವನ್ನು ನೀಡಿದೆ. ನಾನು KST ಗಾಗಿ ಈ ವರ್ಷ EC ಯ ಭಾಗವಾಗಿದ್ದೇನೆ ಎಂದು ಹೇಳಲು ನಾನು ತುಂಬಾ ಹೆಮ್ಮೆಪಡುತ್ತೇನೆ ಮತ್ತು ಇನ್ನೂ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ನಾನು ತುಂಬಾ ರೋಮಾಂಚನಗೊಂಡಿದ್ದೇನೆ.

Yuktha _Raghavendra_Rao_24

Yuktha Rao

ಎಲ್ಲರಿಗೂ ನಮಸ್ಕಾರ! ನನ್ನ ಹೆಸರು ಯುಕ್ತ ರಾವ್. ನಾನು ಹತ್ತನೇ ತರಗತಿಗೆ ಹೋಗುತ್ತಿದ್ದೇನೆ. ನಾನು 2010 ರಿಂದ ಕನ್ನಡ ಸಂಘದ ಟೊರೊಂಟೊ ಸದಸ್ಯಳಾಗಿದ್ದೇನೆ ಮತ್ತು ಲೆಕ್ಕವಿಲ್ಲದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ನಾನು 2 ವರ್ಷಗಳಿಂದ KST ಯುವ ಸದಸ್ಯಳಾಗಿದ್ದೇನೆ. ಈ ವರ್ಷ, ನನ್ನ ಸಮುದಾಯದಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸಲು ಮತ್ತು ನಮ್ಮ ಸಂಸ್ಕೃತಿ ಹಾಗು ಜ್ಞಾನದ ಬಗ್ಗೆ ಹಂಚಿಕೊಳ್ಳಲು ಮತ್ತು ಕಲಿಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಯುವ EC ಸದಸ್ಯಳಾಗಿ ಈ ಅದ್ಭುತ ಸಂಸ್ಥೆಗೆ ಹೆಚ್ಚಿನ ಕೊಡುಗೆ ನೀಡಲು ನಾನು ಖಂಡಿತವಾಗಿಯೂ ಇಷ್ಟಪಡುತ್ತೇನೆ.

Youth Volunteers – 2024- 2025

Abhigna Chethan

Arav Murthy

Dheeraj Vijay

Dheeraj Vijay

Divya_Swaroop

Diya Swaroop

Neel_Kiran_Kumar

Neel Kiran Kumar

Parinita.Marad

Parinita Marad

Ronith_Boya_1

Ronith Boya

Samarth Patna Abhinandhan

Samarth Patna Abhinandhan

Siya_Srinivas

Siya Srinivas​

Shreesh ShivuMysore

Shreesh ShivuMysore​

Shrinika Malghan

Shrinika Malaghan​

ShriyaShivamallu

Shriya Shivamallu​

Shruti

Shruthi Subrahmanya

Yash_Pujar

Yash Pujar

Platinum Sponsors

Gold Sponsors

Silver Sponsors

Bronze Sponsors

Scroll to Top