ನಮ್ಮ ನುಡಿ
ಶ್ರೀ ಗುರುಭ್ಯೋ ನಮಃ
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಕುವೆಂಪು ಅವರ ಕಾವ್ಯ ವಚನವನ್ನು ಶಿರಸಾ ವಹಿಸಿಕೊಂಡು, ಸಪ್ತ ಸಾಗರದಾಚೆ ಇರುವ ಈ ಕೆನಡಾದ ಟೊರೊಂಟೊ ನಗರದಲ್ಲಿ ಕನ್ನಡ ಸಂಘ ವನ್ನು ಹುಟ್ಟಿಹಾಕಿ, ಬೆಳೆಸಿ, ಪೋಷಿಸಿದ ಎಲ್ಲ ಮಹನೀಯರಿಗೆ ನಮ್ಮ ಹೃತ್ಪೂರ್ವಕ ಮೊದಲ ವಂದನೆಗಳು.
ಹಾಗೆಯೇ ೨೦೨೫ – ೨೭ ನೇ ಸಾಲಿನ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ನನ್ನ ಕೃತಜ್ಞತೆ ಗಳು.
ಈ ಕನ್ನಡ ಸಂಘ ಕೇವಲ ನಮ್ಮ ಟೋರೊಂತೋ ವಲಯದ ಕನ್ನಡಿಗರ ಆಸ್ತಿ ಮಾತ್ರವಲ್ಲ, ಕೆನಡಾದ ಮುಂಚೂಣಿ ಕನ್ನಡ ಸಂಘಟನೆಯೂ ಹೌದು. ನಮ್ಮೆಲ್ಲರ ಈ ಪ್ರತಿಷ್ಟಿತ ಸಂಘವನ್ನು ನಾವು ಮುನ್ನಡೆಸುವುದು ಕೇವಲ ನಿಮಿತ್ತ ಮಾತ್ರ ರಾಗಿ ಎಂಬುದನ್ನು ಮನದಲ್ಲಿಟ್ಟುಕೊಂಡು, ಹಾಗೆಯೇ ನಿಮ್ಮ ಪ್ರತಿನಿಧಿಗಳಾಗಿ ನಮ್ಮ ಕಾಲಾವಧಿ ಯನ್ನು ಪ್ರಾರಂಭಿಸುತ್ತಿದ್ದೇವೆ .
ನಿಮಗೆಲ್ಲರಿಗೆ ಈಗಾಗಲೇ ತಿಳಿದಿರುವ ಹಾಗೆ ಕಾರ್ಯಕಾರಿ ಸಮಿತಿ ಹೊಸದಾಗಿ ರೂಪುಗೊಂಡಿದ್ದು, ಕೆ.ಎಸ್.ಟಿ ಯ ವತಿಯಿಂದ ವಿವಿಧ ಕಾಯಕ್ರಮಗಳನ್ನು ಏರ್ಪಡಿಸಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದೇವೆ. ನಮ್ಮ ಈ ನವ ಕಾರ್ಯಕಾರಿ ಸಮಿತಿಯನ್ನು ಹರಸಿ, ಮಾರ್ಗರ್ದರ್ಶನ ನೀಡಿ ಸಹಕರಿಸಬೇಕಾಗಿ ಕಳಕಳಿಯ ವಿನಂತಿ.
ನಮ್ಮ ಹಿರಿಯರಿಂದ ಅಮೂಲ್ಯ ಬಳುವಳಿಯಾಗಿ ಬಂದ ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವತ್ತ ನಮ್ಮ ಗಮನವನ್ನು ಹರಿಸುತ್ತೇವೆ ಎನ್ನುವ ಭರವಸೆಯನ್ನು ನೀಡುತ್ತಾ,
ಗಜಮುಖದವಗೆ ಗಣಪಗೆ ತ್ರಿಜಗ ವಂದಿತ ಗಣಪಗೆ ಆರತಿ ಎತ್ತಿರೆ ಎಂಬ ಪ್ರಾರ್ಥನೆಯೊಂದಿಗೆ ಈ ವರ್ಷದ ಪ್ರಾರಂಭವನ್ನು ಎಂದಿನ ವಾಡಿಕೆಯಂತೆ, ಮೊದಲಿಗೆ ಗಣೇಶ ಹಬ್ಬ ಆಚರಿಸುವ ಮುಖೇನ ಮಾಡುತಿದ್ದೇವೆ.
ಸಿರಿ ಕನ್ನಡಂ ಗೆಲ್ಗೆ.
ಶ್ರೀಹರ್ಷ ಹೆಗಡೆ
ಅಧ್ಯಕ್ಷರು – ಕನ್ನಡ ಸಂಘ ಟೊರೊಂಟೊ
Though all of us have made Canada our home, we all hail from and culturally rooted in the great state of Karnataka in India. We are proud of our language Kannada and our rich heritage and culture and these values bring us together as a community. Our sincere thanks to our seniors, who more than 50 years ago felt the need for Kannada Sangha which started in a small way and has grown to be a mammoth cultural organization in Toronto. Year after year, various committees have contributed to the growth of Kannada Sangha, and we thank all those leaders and it is now our turn to carry the baton and glorify its cause.
I am extremely grateful to the community members for choosing me as the President of Kannada Sangha Toronto for the year 2025-27. Kannada Sangha Toronto is proud to be the largest cultural organization for Kannadigas in the country. We thank you for giving us, the new Executive Committee, the opportunity to carry forward the great work done by our predecessors. Our committee is beginning our activities starting with the traditional Ganesha Habba and we earnestly look forward to your blessings and support in our efforts. I request you all to participate in the forthcoming Ganesha Habba function on September 14 and your support and contributions will be much appreciated
Shreeharsha Hegde
President -Kannada Sangha Toronto