ಎಲ್ಲರಿಗೂ ನಮಸ್ಕಾರ.🙏
ಡಾ. ಜಯಶ್ರೀ ಅರವಿಂದ್ ಅಭಿನಂದನೆ ಮತ್ತು ಗೀತಪ್ರೀತಿ: ಇ-ಪುಸ್ತಕ ಲೋಕಾರ್ಪಣೆ
ದಿನಾಂಕ: ಭಾನುವಾರ, ಫೆಬ್ರವರಿ 4, 2024
ಸಮಯ: ಬೆಳಗ್ಗೆ 11:00 EST.
ಆಯೋಜಕರು: ಕನ್ನಡ ಸಂಘ ಟೊರೊಂಟೊ
ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಡಾ. ಜಯಶ್ರೀ ಅರವಿಂದ್ ಅವರಿಗೆ ಸನ್ಮಾನ ಮತ್ತು ಸಿಗಮ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಅಧ್ಯಯನ ಮತ್ತು ಅಭಿನಂದನಾ ಗ್ರಂಥ “ಗೀತಪ್ರೀತಿ: ಸುಗಮ ಸಂಗೀತಸಿರಿ” ಯ ಇ-ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಇದೇ ಬರುವ ಫೆಬ್ರವರಿ 4 ರಂದು ಬೆಳಗ್ಗೆ ಟೊರೊಂಟೊ ಸಮಯ 11:00 ಗಂಟೆಗೆ zoom ಝೂಮ್ ಮಾಧ್ಯಮದ ಮುಖಾಂತರ ನಡೆಯಲಿದೆ. ಟೊರೊಂಟೊ ಕನ್ನಡ ಸಂಘವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಗೀತ ಪ್ರೀತಿ ಇ-ಪುಸ್ತಕ ಲೋಕಾರ್ಪಣೆ ಸಮಾರಂಭ ಮುಖ್ಯ ಅತಿಥಿಗಳಾಗಿ ಜನಪ್ರಿಯ ಕವಿ, ಸಾಹಿತಿ, ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಮತ್ತು ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಭಾಗವಹಿಸಿ, ಉತ್ತರ ಅಮೆರಿಕದಾದ್ಯಂತ ಇರುವ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೆನಡಾದ ಹಾಡುಗಾರರಾದ ಪವನ್ ರಾವ್, ನಮ್ರತಾ ಪ್ರಸಾದ್ ಮತ್ತು ಶ್ರೀಸೂಕ್ತ ಪಟ್ಟಾಭಿ ಅವರು ಹಾಡುಗಳನ್ನು ಹಾಡಲಿದ್ದಾರೆ.
ಗೀತಪ್ರೀತಿ: ಸುಗಮ ಸಂಗೀತಸಿರಿ, ಪುಸ್ತಕವು ಅವರ ಅಭಿನಂದನಾ ಮತ್ತುಡಾ. ಜಯಶ್ರೀ ಅರವಿಂದ್ ಸುಗಮ ಸಂಗೀತ ಕ್ಷೇತ್ರದ ಅಧ್ಯಯನ ಗ್ರಂಥವಾಗಿದ್ದು, ಇದರಲ್ಲಿ ವಿಶ್ವಾದ್ಯಂತದ 115 ಲೇಖಕರ ಜ್ಣಾನಾನುಭವದ ಲೇಖನಗಳಿವೆ. ಈ ಗ್ರಂಥವನ್ನು ಹಿರಿಯ ಪತ್ರಕರ್ತ, ಕವಿ, ಸಾಹಿತಿ, ಶ್ರೀ ಮುರಲಿಕೃಷ್ಣ ಬೆಳಾಲು ಸಂಪಾದಿಸಿದ್ದಾರೆ.
ದಯವಿಟ್ಟು ಈ ಆಮಂತ್ರಣವನ್ನು ಅಮೇರಿಕ ಮತ್ತು ಕೆನಡಾದ ಸುತ್ತಮುತ್ತಲಿನ ನಿಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಹಂಚಿಕೊಂಡು ಕಾರ್ಯಕ್ರಮದಲ್ಲಿ ತಾವೂ ಭಾಗಿಯಾಗಿ ಎಂದು ವಿನಂತಿಸಿಕೊಳ್ಳುತ್ತಿದ್ದೇವೆ.
ಎಲ್ಲರಿಗೂ ಸ್ವಾಗತ.🙏
ಕಾರ್ಯಕ್ರಮದಲ್ಲಿ ಭಾಗವಹಿಸಲು ಝೂಮ್ ಕೊಂಡಿ ಇಲ್ಲಿದೆ. ಪ್ರವೇಶ ಮುಕ್ತ.
https://bit.ly/3S3bO4E